ಕ್ವಿಂಟಲ್ ರಾಗಿಗೆ 3295 ರೂ. ಮಾತ್ರ.. ಬೆಂಬಲ ಬೆಲೆ ಹೆಚ್ಚಳಕ್ಕೆ ರೈತರ ಮನವಿ.. - tumkur crop Purchase Center
ತುಮಕೂರು : ಜಿಲ್ಲೆಯಲ್ಲಿ ತೆರೆಯಲಾಗಿರುವ ಖರೀದಿ ಕೇಂದ್ರದಲ್ಲಿ ರೈತರು ಮುಗಿಬಿದ್ದು ರಾಗಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕ್ವಿಂಟಾಲ್ಗೆ 3295 ರೂ. ನಂತೆ ಸರ್ಕಾರದಿಂದ ಖರೀದಿಸಲಾಗುತ್ತಿದೆ. ಆದ್ರೆ, ದುಬಾರಿ ವೆಚ್ಚದ ಹಿನ್ನೆಲೆ ಬೆಂಬಲ ಬೆಲೆಯನ್ನೂ ಹೆಚ್ಚಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಇದ್ರಿಂದ ರಾಗಿ ಬೆಳೆದ ರೈತರಿಗೆ ತೃಪ್ತಿಕರ ಬೆಲೆ ದೊರೆತಂತಾಗಲಿದೆ ಎನ್ನುತ್ತಿದ್ದಾರೆ. ಒಂದು ವಾರದಿಂದ ರಾಗಿ ಖರೀದಿಸಲಾಗುತ್ತಿದೆ. ನಿತ್ಯ ಸಾವಿರಾರು ಕ್ವಿಂಟಾಲ್ ಖರೀದಿ ಕೇಂದ್ರಕ್ಕೆ ಆವಕವಾಗುತ್ತಿದೆ.