ನಿರ್ವಿಘ್ನ ಗಣಪತಿ ಹಬ್ಬಕ್ಕೆ ಜಿಲ್ಲಾಡಳಿತ ಸಿದ್ಧತೆ.. ವಿವಿಧ ಇಲಾಖೆಗಳ ಅನುಮತಿ ಒಂದೇ ಸೂರಿನಡಿ - ಏಕಗವಾಕ್ಷಿ ಯೋಜನೆ
ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಗಣೇಶ ಭಕ್ತರಿಗೊಂದು ಸಂತಸದ ಸುದ್ದಿ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲು ಪಡೆಯಬೇಕಿದ್ದ ವಿವಿಧ ಇಲಾಖೆಗಳ ಅನುಮತಿ ಒಂದೇ ಸೂರಿನಡಿ ದೊರೆಯುತ್ತಿದೆ. ಏಕಗವಾಕ್ಷಿ ಯೋಜನೆ ಅಡಿ ಒಂದೇ ಕಚೇರಿಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಗಣೇಶ ಪ್ರತಿಷ್ಠಾಪನೆ ಮಾಡುವ ಭಕ್ತರಿಗೆ ಅನುಮತಿ ನೀಡಲು ಮುಂದಾಗಿದ್ದಾರೆ.