ಲಾಕ್ಡೌನ್ ಸಡಿಲಿಕೆ ನಂತರವೂ ಪ್ರಯಾಣಿಕರಿಲ್ಲದೆ ಪರದಾಡುತ್ತಿರುವ ಟ್ಯಾಕ್ಸಿ ಚಾಲಕರು - Taxi drivers facing problem
ತುಮಕೂರು: ಇಷ್ಟು ದಿನ ಲಾಕ್ಡೌನ್ ಇದ್ದಿದ್ದರಿಂದ ಜನರು ಮನೆಯಿಂದ ಹೊರಬರುತ್ತಿರಲಿಲ್ಲ. ಆದರೆ ಈಗ ಲಾಕ್ಡೌನ್ ಸಡಿಲಿಕೆಯಾಗಿದೆ. ಟ್ಯಾಕ್ಸಿ ಚಾಲಕರು ಮತ್ತೆ ರಸ್ತೆಗಿಳಿದು ಬಾಡಿಗೆಗಾಗಿ ಕಾಯುತ್ತಿದ್ದಾರೆ. ಆದರೆ ಪ್ರಯಾಣಿಕರು ಕೊರೊನಾ ಭೀತಿಯಿಂದ ಟ್ಯಾಕ್ಸಿಯಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟ್ಯಾಕ್ಸಿ ಚಾಲಕರು ತೊಂದರೆಗೆ ಒಳಗಾಗಿದ್ದು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.