ಕಲ್ಪತರು ನಾಡಲ್ಲಿ ಮತ್ತೆ ಏರಿಕೆಯಾಗುತ್ತಿದೆ ಕೊರೊನಾ ಸೋಂಕು - ತುಮಕೂರು ಕೊರನಾ ವೈರಸ್ ಪ್ರಕರಣ
ತುಮಕೂರು: ಕಲ್ಪತರು ನಾಡಿನಲ್ಲಿ ನಿನ್ನೆ 25 ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ. 60 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ, 141 ಸೋಂಕಿತರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಮೂವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಜಿಲ್ಲೆಯ ವಿವಿಧೆಡೆ ಕಳೆದ 15 ದಿನಗಳಿಂದ ಹತ್ತು ವರ್ಷದೊಳಗಿನ ಬಾಲಕರು ಕೂಡ ಸೋಂಕಿಗೆ ಒಳಗಾಗುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳ ಕುರಿತಾದ ವಾಕ್ ಥ್ರೂ ಇಲ್ಲಿದೆ.