ಸಿಡಿ ಲೇಡಿ ಪ್ರತ್ಯಕ್ಷವಾದಾಗ ಸತ್ಯ ಬಹಿರಂಗ: ಸಚಿವ ಸುರೇಶ್ ಕುಮಾರ್ - ಸಿಡಿ ಪ್ರಕರಣದ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ,
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಿಡಿಯಲ್ಲಿ ಕಾಣಿಕೊಂಡಿರುವ ಮಹಿಳೆ ಪ್ರತ್ಯಕ್ಷವಾಗುವರೆಗೂ ಸತ್ಯ ಹೊರಬರುವುದಿಲ್ಲ. ಸಿಡಿ ಹಿಂದಿರುವ ಮಹಾನ್ ನಾಯಕನ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಹಲವಾರು ಜನ ಮಹಾನ್ ನಾಯಕರಿದ್ದಾರೆ ಎಂದು ಹೇಳಿದರು. ಸದನದಲ್ಲಿ ಖಾಸಗಿ ವಿಚಾರಗಳ ಬಗ್ಗೆ ಚರ್ಚೆ ನಡೆದಿರುವುದಕ್ಕೆ ಸಭಾಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ. ನನಗೂ ಖೇದವಾಗಿದೆ. ಖಾಸಗಿ ವಿಚಾರಗಳ ಬಗ್ಗೆ ಚರ್ಚೆಗೆ ಬೇರೆ ಬೇರೆ ವೇದಿಕೆಗಳಿವೆ. ಸದನದಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಾದ್ದು ಅಗತ್ಯ ಎಂದರು. ಕೊರೊನಾ ಉಲ್ಬಣ ಕುರಿತು ಮಾತನಾಡಿದ ಅವರು, ಕೊರೊನಾ ಸೋಂಕು ಜಾಸ್ತಿಯಾಗುತ್ತಿಲ್ಲ. ಕೊರೊನಾ ವಿರುದ್ಧ ಸಾರ್ವಜನಿಕರ ಅಸಹಕಾರ ಚಳವಳಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.