ತಗ್ಗಿದ ಪ್ರವಾಹ: ಸಂಚಾರಕ್ಕೆ ಮುಕ್ತವಾದ ತ್ರಿವೇಣಿ ಸಂಗಮ, ಅಂಗಡಿಗಳನ್ನ ಶುಚಿಗೊಳಿಸಿದ ವ್ಯಾಪಾರಸ್ಥರು - Kodagu Triveni Sangama is an open argument for traffic News
ಕೊಡಗಿನಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕಾವೇರಿ ನದಿ ಪ್ರವಾಹ ಸಂಪೂರ್ಣ ತಗ್ಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಯ ಪ್ರವಾಹ ಕಡಿಮೆಯಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಪ್ರವಾಹದ ನೀರಿನಿಂದ ಅಂಗಡಿಯೊಳಗೆ ಸೇರಿದ್ದ ಕೆಸರು, ಕಸ-ಕಡ್ಡಿಗಳನ್ನು ಶುಚಿಗೊಳಿಸುತ್ತಿರುವ ದೃಶ್ಯಗಳು ಕಂಡು ಬಂದವು. ಹಾಗೆಯೇ ವಾಹನ ಸಂಚಾರವೂ ಆರಂಭಗೊಂಡಿದೆ. ಮೂರು ದಿನಗಳಿಂದ ಪ್ರವಾಹದಲ್ಲಿ ಭಾಗಮಂಡಲದ ಅಂಗಡಿ ಮುಂಗಟ್ಟುಗಳು ಮುಳುಗಡೆ ಆಗಿದ್ದವು.