ಬೀಳುವ ಸ್ಥಿತಿಯಲ್ಲಿ ಮರ: ಅನಾಹುತಕ್ಕೂ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಪಾಲಿಕೆ - ಬೀಳುವ ಹಂತದಲ್ಲಿ ಮರ
ಹುಬ್ಬಳ್ಳಿ: ನವನಗರದ ಕರ್ನಾಟಕ ವೃತ್ತದಲ್ಲಿ ಮರವೊಂದು ಸಂಪೂರ್ಣ ಬಾಗಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ನೆಲಕ್ಕೆ ಉರುಳಬಹುದು. ಜೋರಾಗಿ ಗಾಳಿ ಬೀಸಿದರೆ ಸಾಕು ಮರ ಬೀಳುವ ಸಾಧ್ಯತೆ ಇದ್ದು, ನಿವಾಸಿಗಳು ಕೈಯಲ್ಲಿ ಜೀವ ಹಿಡಿದುಕೊಂಡೇ ಅದರ ಕೆಳಗೆ ಸಂಚರಿಸಬೇಕಿದೆ. ಒಂದು ವೇಳೆ ಬಿದ್ದರೆ ದೊಡ್ಡ ಪ್ರಮಾಣದ ಅನಾಹುತವೇ ಸಂಭವಿಸಲಿದೆ. ಅಲ್ಲದೇ, ಈ ಕುರಿತು ಅಧಿಕಾರಿಗಳಿಗೆ ದೂರು ಕೊಟ್ಟು ಸಾಕಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.