ಧಾರವಾಡದಲ್ಲಿ ಮಳೆ: ಆಟೋ ಮೇಲೆ ಉರುಳಿದ ಮರ... ಚಾಲಕನಿಗೆ ಗಾಯ - Dharwad News
ಧಾರವಾಡ: ನಗರದಲ್ಲಿ ಸುರಿದ ಮಳೆಯಿಂದ ಮರವೊಂದು ಆಟೋ ಮೇಲೆ ಉರುಳಿದ ಘಟನೆ ಧಾರವಾಡದ ಸಿಬಿಟಿ ಬಳಿ ನಡೆದಿದೆ. ಇಂದು ಮುಂಜಾನೆಯಿಂದ ಸುರಿದ ಮಳೆಯಿಂದ ಮರ ಧರೆಗೆ ಉರುಳಿದೆ. ಇದರಿಂದ ನೂರ್ ಅಹ್ಮದ್ ಮಾಗಡಿ ಎಂಬುವವರಿಗೆ ಗಾಯವಾಗಿದ್ದು, ಆಟೋ ರಿಕ್ಷಾ ಜಖಂಗೊಂಡಿದೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.