ಭಾರಿ ಮಳೆಗೆ ಧರೆಗುರುಳಿದ ದೈತ್ಯ ಮರ: ತಪ್ಪಿದ ಗಂಡಾಂತರ - ರಘುನಾಥಪುರ ಗ್ರಾಮ
ದೊಡ್ಡಬಳ್ಳಾಪುರ ತಾಲೂಕಿನ ಸುತ್ತ ಮುತ್ತ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ರಘುನಾಥಪುರ ಗ್ರಾಮದಲ್ಲಿ ದೈತ್ಯ ಮರವೊಂದು ಬುಡ ಸಮೇತ ರಸ್ತೆ ಮಧ್ಯೆ ಉರುಳಿ ಬಿದ್ದಿದೆ. ಮರದ ಪಕ್ಕದಲ್ಲೇ ಮನೆಗಳಿದ್ದು, ಅದೃಷ್ಟಕ್ಕೆ ಮರಗಳ ಮೇಲೆ ಮರ ಬೀಳದೆ ಯಾವುದೇ ಪ್ರಾಣಹಾನಿಯಾಗಿಲ್ಲ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತಡೆಯಾಗಿತ್ತು. ಇನ್ನು ಮರ ಬಿದ್ದು ತಾಸುಗಳೇ ಕಳೆದರೂ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಬಾರದಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.