ಅಂಕೋಲಾದಲ್ಲಿ ನಕಲಿ ವೈದ್ಯರ ಹಾವಳಿ: ಕೊರೊನಾ ಲಸಿಕೆ ವಿರುದ್ಧವೇ ಅಪಪ್ರಚಾರ ಮಾಡಿ ದಂಧೆ - ನಕಲಿ ವೈದ್ಯರು
ಕಾರವಾರ:ಅಂಕೋಲಾದಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರಿದೆ. ವೈದ್ಯಕೀಯ ಪದವಿ, ನೋಂದಣಿ ಪ್ರಮಾಣ ಪತ್ರ ದಾಖಲೆಗಳಿಲ್ಲದೇ ತುಕ್ಕು ಹಿಡಿದ ವೈದ್ಯಕೀಯ ಚಿಕಿತ್ಸಾ ಸಲಕರಣೆಗಳ ಮೂಲಕ ಮುಗ್ದ ಹಳ್ಳಿ ಜನರನ್ನು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.ಇದಲ್ಲದೆ ಕೊರೊನಾ ಲಸಿಕೆ ವಿರುದ್ಧ ನಕಲಿ ವೈದ್ಯರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊರೊನಾ ಹೆಸರಿನಲ್ಲಿ ಹತ್ತಾರು ದಂಧೆಗಳು ಶುರುವಾಗಿ ಹಣವನ್ನ ವ್ಯವಸ್ಥಿತವಾಗಿ ಪೀಕುವ ಜಾಲ ಜೋರಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.