ಉತ್ತರ ಕನ್ನಡ ಹೈ-ವೇ ಗಳಲ್ಲಿ ಗ್ಯಾಸ್ ಟ್ಯಾಂಕರ್ಗಳ ದರ್ಬಾರ್: ಜಿಲ್ಲಾಡಳಿತದ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ - Transportation of Gas Tanker Increased
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಹಾಗೂ 63ರಲ್ಲಿ ಗ್ಯಾಸ್ ಟ್ಯಾಂಕರ್ಗಳ ಸಂಚಾರದ ಹಾವಳಿ ಅತಿರೇಕಕ್ಕೇರಿದ್ದು, ಹಿಂದೊಮ್ಮೆ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು ಜಿಲ್ಲೆಯಲ್ಲಿ ಅತಿ ದೊಡ್ಡ ಅನಾಹುತವೇ ಸೃಷ್ಟಿಯಾಗಿತ್ತು. ಈ ಹಿನ್ನೆಲೆ, ಜಿಲ್ಲಾಡಳಿತದಿಂದ ಅನಾಹುತ ಸಂಭವಿಸದಿರಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದೀಗ ಯ್ಯಾವ ನಿಯಮಗಳಿಗೂ ಕ್ಯಾರೆ ಎನ್ನದೇ ಮತ್ತೆ ಅಪಾಯದ ಸ್ಥಿತಿಯಲ್ಲಿ ಟ್ಯಾಂಕರ್ ಸಂಚಾರ ನಡೆಯುತ್ತಿದೆ. ಟ್ಯಾಂಕರ್ಗಳ ಹಾವಳಿಯಿಂದಾಗಿ ಹೆದ್ದಾರಿಯಂಚಿನ ಜನರು ನಿತ್ಯ ಆತಂಕದಲ್ಲಿಯೇ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದಲ್ಲಿ ಉಂಟಾದ ಅನಾಹುತಗಳ ಬಗೆಗಿನ ಒಂದು ವರದಿ ಇಲ್ಲಿದೆ.