ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಹಕ್ಕು ಚಲಾಯಿಸಿದ ಮಂಗಳಮುಖಿಯರು - Manglore municipality election
🎬 Watch Now: Feature Video
ಮಂಗಳೂರು: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 10ಕ್ಕೂ ಅಧಿಕ ಮಂಗಳಮುಖಿಯರು ಮತ ಚಲಾಯಿಸಿದರು. ನಗರದ ಮಿಲಾಗ್ರಿಸ್ ಶಾಲೆಯ ವಾರ್ಡ್ ನ ಬೂತ್ ಸಂಖ್ಯೆ 40ರಲ್ಲಿ ಮತ ಚಲಾಯಿಸಿದ ಮಂಗಳಮುಖಿಯರು ಇದುವರೆಗೆ ಮೂರು ಬಾರಿ ಮತ ಚಲಾಯಿಸಿದ್ದೇವೆ ನಮಗೆ ಯಾವುದೇ ಸೌಲಭ್ಯಗಳು ಇದುವರೆಗೆ ಸಿಕ್ಕಿಲ್ಲ, ನಮ್ಮನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ ಅದು ನಿಲ್ಲಬೇಕು ಎಂದು ಮನವಿ ಮಾಡಿದರು.