ರೈತರ ಪರೇಡ್ಗೆ ಮಂಗಳಮುಖಿಯರ ಸಾಥ್: 300ಕ್ಕೂ ಹೆಚ್ಚು ರೈತರಿಗೆ ತಿಂಡಿ ವ್ಯವಸ್ಥೆ - ರೈತರ ಪರೇಡ್ಗೆ ಮಂಗಳಮುಖಿಯರ ಸಾಥ್
ಬೆಂಗಳೂರು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರ ಪರೇಡ್ಗೆ ಮಂಗಳಮುಖಿಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೃಷಿ ಸುಧಾರಣೆ ಕಾಯ್ದೆ ವಾಪಸ್ ಪಡೆಯುವುದಕ್ಕೆ ಒತ್ತಾಯಿಸಿದರು. ನೇಗಿಲ ಹೊತ್ತ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಹಾಡನ್ನ ಹಾಡಿ ರೈತರ ಪರೇಡ್ ಗೆ ಸಾಥ್ ನೀಡಿದರು. ಜೊತೆಗೆ ಇಂದು ಬೆಳಗ್ಗೆ 300ಕ್ಕೂ ಹೆಚ್ಚು ರೈತರಿಗೆ ತಿಂಡಿ ವ್ಯವಸ್ಥೆ ಮಾಡಿದ್ದರು.12:30 ಮಧ್ಯಾಹ್ನ ಸುಮಾರಿಗೆ ನಗರದ ಹೊರವಲಯ ದಿಂದ ರೈತರು ಫ್ರೀಡಂ ಪಾರ್ಕ್ ತಲುಪಲಿದ್ದಾರೆ.
Last Updated : Jan 26, 2021, 10:52 AM IST