ರೈಲ್ವೆ ಹಳಿ ಮೇಲೆ ನದಿಯಂತೆ ಹರಿಯುತ್ತಿದೆ ಮಳೆ ನೀರು... ಕಲಬುರಗಿ-ಬೀದರ್ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ - ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ
ಕಳೆದರೆಡು ದಿನಗಳಿಂದ ಕಲಬುರಗಿ ಜಿಲ್ಲೆಯ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗುಡ್ಡದಿಂದ ಮಳೆ ನೀರು ಹರದುಬಂದ ಕಾರಣ ಕಲಬುರಗಿ - ಬೀದರ್ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮರಗುತ್ತಿ ರೈಲ್ವೆ ಸುರಂಗ ಮಾರ್ಗದ ಮೇಲೆ ಗುಡ್ಡದಿಂದ ಮಳೆ ನೀರು ಹರಿದು ಬರುತ್ತಿದೆ. ಸುರಂಗಕ್ಕೆ ಹೊಂದಿಕೊಂಡು ಕಟ್ಟಲಾದ ತಡೆಗೋಡೆ ಕುಸಿತಗೊಂಡು ರೈಲ್ವೆ ಹಳಿಯ ಮೇಲೆ ಕಲ್ಲು ಬಿದ್ದಿವೆ. ಹಳಿಯುದ್ದಕ್ಕೂ ಮಳೆ ನೀರು ಹರಿಯತೊಡಗಿರುವ ಪರಿಣಾಮ ಒಂದು ದಿನದ ಮಟ್ಟಿಗೆ ಬೀದರ್-ಕಲಬುರಗಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.