ಕರ್ನಾಟಕ

karnataka

ETV Bharat / videos

ಖಾಸಗಿ ಶಾಲಾ-ಕಾಲೇಜುಗಳಿಗೆ ಸಂಚಾರಿ ಪೊಲೀಸರಿಂದ ನೋಟಿಸ್​​... ಯಾಕೆ ಗೊತ್ತಾ?

By

Published : Sep 14, 2019, 1:26 PM IST

ಬೆಂಗಳೂರು: ರಸ್ತೆ ಬದಿಗಳಲ್ಲಿ ಶಾಲಾ ಬಸ್ ನಿಲ್ಲಿಸಿ, ಸಂಚಾರ ದಟ್ಟಣೆಗೆ ಕಾರಣವಾಗುತ್ತಿರುವ ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ನೊಟೀಸ್ ನೀಡುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ರಸ್ತೆಗಳಲ್ಲಿ ಶಾಲಾ ಬಸ್​ಗಳನ್ನು ಪಾರ್ಕ್ ಮಾಡುತ್ತಿರುವ ಹಿನ್ನೆಲೆ ನಗರದ ಬಹುತೇಕ ಕಡೆ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ.‌ ಈ ಹಿನ್ನೆಲೆ ನಿಯಮ ಮೀರಿ ರಸ್ತೆಗಳಲ್ಲಿ ಶಾಲಾ ಬಸ್​ಗಳನ್ನ ಪಾರ್ಕ್ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ನಿಯಮ ಉಲ್ಲಂಘಿಸಿದ ಶಾಲಾ-ಕಾಲೇಜುಗಳಿಗೆ ಆಯಾ ವಿಭಾಗದ ಸಂಚಾರಿ ಪೊಲೀಸರು ನೊಟೀಸ್ ನೀಡಿ ಎಚ್ಚರಿಸುತ್ತಿದ್ದಾರೆ. ಒಂದು ವೇಳೆ ನೋಟಿಸ್​ಗೂ ಶಾಲಾ-ಕಾಲೇಜು ಆಡಳಿತ ವರ್ಗ ಎಚ್ಚೆತ್ತುಕೊಳ್ಳದೇ ಇದ್ರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details