ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಾಹನ ಸವಾರರಿಗೆ ಬಿತ್ತು ದಂಡ - ಕೋಲಾರದಲ್ಲಿ ವಾಹನ ಸವಾರರಿಗೆ ದಂಡ ವಿಧಿಸಿದ ಪೊಲೀಸರು
ಕೋಲಾರ ನದಗರದಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆಗೆ ರಸ್ತೆಗಿಳಿದಿದ್ದು, ಎಸ್.ಎನ್.ಆರ್ ಆಸ್ಪತ್ರೆ ಮುಂಭಾಗ ಶಾಲಾ ಮಕ್ಕಳನ್ನ ಕರೆದೊಯ್ಯುವ ಆಟೋಗಳು ಸೇರಿದಂತೆ ಓವರ್ ಲೋಡ್ ಹಾಕಿರುವಂತಹ ವಾಹನಗಳನ್ನ ತಡೆದು, ಸವಾರರಿಗೆ ಸೂಚನೆ ನೀಡಿ ದಂಡ ವಿಧಿಸಿದ್ದಾರೆ. ಇನ್ನು ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ದಂಡ ವಿಧಿಸಿದ್ದಲ್ಲದೇ ಸಂಚಾರಿ ನಿಯಮಗಳ ಕುರಿತು ಸವಾರರಲ್ಲಿ ಜಾಗೃತಿ ಮೂಡಿಸಿದರು. ಇನ್ನು ಆಟೋಗಳಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನ ಹೊತ್ತುಯ್ಯುತ್ತಿದ್ದ ಆಟೋ ಚಾಲಕರಿಗೂ ಪೊಲಿಸರು ಎಚ್ಚರಿಕೆ ನೀಡಿದ್ದಾರೆ.