ಸೂಕ್ತ ದಾಖಲಾತಿಗಳೊಂದಿಗೆ ರಸ್ತೆಗಿಳಿಯುವಂತೆ ವಾಹನ ಸವಾರರಿಗೆ ಸಂಚಾರಿ ಪೊಲೀಸರ ಮನವಿ - traffic police department requested motorists
ಕಲಬುರಗಿ: ವಾಹನ ಸವಾರರು ಸೂಕ್ತ ದಾಖಲಾತಿಗಳೊಂದಿಗೆ ರಸ್ತೆಗಿಳಿಯುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಆಯೋಜಿಸಿದ ಕಾರ್ಯಕ್ರಮದ ಹಿನ್ನೆಲೆ ಕಲಬುರಗಿ ಪೊಲೀಸರು ರಸ್ತೆಯಲ್ಲಿ ಅಪಘಾತದ ಭಾವಚಿತ್ರಗಳು ಹಾಗೂ ಟ್ರಾಫಿಕ್ ರೂಲ್ಸ್ ಚಿತ್ರಗಳನ್ನು ಹಿಡಿದು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರನ್ನು ತಡೆದ ಪೊಲೀಸರು ರಸ್ತೆ ಸುರಕ್ಷತಾ ಕ್ರಮಗಳನ್ನು ಕುರಿತು ಅರಿವು ಮೂಡಿಸಿದರು.