ಸಂಪ್ರದಾಯ ಬದ್ಧವಾಗಿ ಕಪ್ಪೆಗಳ ಕಲ್ಯಾಣ.. ಆದರೂ ಕೃಪೆ ತೋರಲೇ ಇಲ್ಲ ವರುಣ.. - ಚಿತ್ರದುರ್ಗ
ಚಿತ್ರದುರ್ಗ:ಕೋಟೆನಾಡು ಮೊದಲಿನಿಂದಲೂ ಬರಪೀಡಿತ ಜಿಲ್ಲೆ. ಇಲ್ಲಿ ಬರಗಾಲ ಸತತ ನಾಲ್ಕೈದು ವರ್ಷಗಳಿಂದ ತಾಂಡವವಾಡುತ್ತಿದ್ದು, ರೈತರು ಹೈರಾಣಾಗಿದ್ದಾರೆ. ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ರೈತರು ಕಪ್ಪೆ ಮದುವೆ ಮಾಡಿಸುವ ಮೂಲಕ ಮೂಢನಂಬಿಕೆಯ ಮೊರೆ ಹೋಗಿದ್ದಾರೆ. ಗಂಡು ಹಾಗೂ ಹೆಣ್ಣಿಗೆ ಸಂಪ್ರದಾಯದಂತೆ ಮದುವೆ ಮಾಡಿರುವ ಗ್ರಾಮಸ್ಥರು ಭರ್ಜರಿ ಭೋಜನ ಸವಿದಿದ್ದಾರೆ.