ಲಾಕ್‌ಡೌನ್ ಉಲ್ಲಂಘಿಸಿ ವ್ಯಾಪಾರ: ಬಿಸಿ ಮುಟ್ಟಿಸಿದ ಖಾಕಿ ಪಡೆ - ಲಾಕ್‌ಡೌನ್ ಜಾರಿ
ಮುದ್ದೇಬಿಹಾಳ : ಎಲ್ಲೆಡೆ ಕೊರೊನಾ ಹರಡವಿಕೆ ತಡೆಗಟ್ಟಲು ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೆ ಅದನ್ನು ಉಲ್ಲಂಘಿಸಿ ಪಟ್ಟಣದ ಹಲವೆಡೆ ತರಕಾರಿ, ಹಣ್ಣು ವ್ಯಾಪಾರ ಮಾಡುತ್ತಿದ್ದವರಿಗೆ ಪೊಲೀಸರು ಬೆಳಗ್ಗೆ ಲಾಠಿ ರುಚಿ ತೋರಿಸಿದ್ದಾರೆ. ಪಟ್ಟಣದ ಬಿಇಒ ಕಚೇರಿ ಎದುರು, ವಿಡಿಸಿಸಿ ಬ್ಯಾಂಕ್ ಪಕ್ಕದಲ್ಲಿ ಹಾಗೂ ತಂಗಡಗಿ ರಸ್ತೆಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡಲು ಮುಂದಾಗಿದ್ದವರಿಗೆ ಪಿಎಸ್ಐ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ಲಾಠಿ ರುಚಿ ತೋರಿಸಿದರು.