ಶೌಚಾಲಯಕ್ಕೆ ಹೋದರೂ ಸಂಬಳ ಕಟ್ ಮಾಡ್ತಾರೆ: ಟೊಯೋಟಾ-ಕಿರ್ಲೋಸ್ಕರ್ ಕಾರ್ಮಿಕರ ಅಳಲು - ಟೊಯೋಟಾ-ಕಿರ್ಲೋಸ್ಕರ್ ಕಾರ್ಮಿಕರು
ಬೆಂಗಳೂರು: ಇತ್ತೀಚಿಗೆ ಟೊಯೋಟಾ - ಕಿರ್ಲೋಸ್ಕರ್ 2ನೇ ಬಾರಿ ಲಾಕ್ ಔಟ್ ಘೋಷಣೆ ಮಾಡಿದ್ದು, ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಮಿಕರ ಬೇಡಿಕೆಗಳನ್ನ ವ್ಯಕ್ತಪಡಿಸಿದರು. ಇದೇ ವೇಳೆ, ತಮ್ಮ ಅಳಲು ವ್ಯಕ್ತಪಡಿಸಿರುವ ಕಾರ್ಮಿಕರು ಶೌಚಾಲಯಕ್ಕೆ ಹೋದರೂ ಸಂಬಳ ಕಟ್ ಮಾಡ್ತಾರೆ. ಹೆಚ್ಚಿನ ಅವಧಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ, ಯಾವುದೇ ರೀತಿಯ ಕಾರ್ಮಿಕ ನೀತಿಗೆ ಅನುಗುಣವಾಗಿ ಕಂಪನಿ ನಡೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ ಟೊಯೋಟಾ - ಕಿರ್ಲೋಸ್ಕರ್ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಈ ಟಿವಿ ಭಾರತದೊಂದಿಗೆ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ