ಕರ್ನಾಟಕ

karnataka

ಚಿಕ್ಕಮಗಳೂರಲ್ಲಿ ಕೊರೊನಾಗೆ ಕ್ಯಾರೆ ಎನ್ನದ ಪ್ರವಾಸಿಗರು: ಸ್ಥಳೀಯರ ಆಕ್ರೋಶ

By

Published : Oct 18, 2020, 6:58 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದರೂ, ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮಾತ್ರ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕವಿಕಲ್ ಗಂಡಿ, ಹೊನ್ನಮ್ಮನ ಹಳ್ಳ, ದತ್ತಪೀಠ, ಮಾಣಿಕ್ಯದಾರ ಸೇರಿದಂತೆ ಹತ್ತಾರು ಭಾಗದಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮಾಸ್ಕ್ ಹಾಕದೇ ಓಡಾಡುತ್ತಿದ್ದಾರೆ. ಸರ್ಕಾರದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಗಿರಿ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿದ್ದು, ಶೇ.70 ರಷ್ಟು ಪ್ರವಾಸಿಗರು ಮಾಸ್ಕ್ ಹಾಕುತ್ತಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

For All Latest Updates

TAGGED:

ABOUT THE AUTHOR

...view details