ಪ್ರವಾಸಿಗರ ಹಾಟ್ಸ್ಪಾಟ್, ಕರ್ನಾಟಕದ ಅತಿ ಸಣ್ಣ ಜಲಾಶಯ “ನಾರಿಹಳ್ಳ” ಭರ್ತಿ - ನಾರಿಹಳ್ಳ ಜಲಾಶಯ ಭರ್ತಿ
ಕರ್ನಾಟಕದ ಅತಿ ಸಣ್ಣ ಜಲಾಶಯ “ನಾರಿಹಳ್ಳ” ಭರ್ತಿಯಾಗಿ ನೀರು ಹೊರಗಡೆ ಬಿಡಲಾಗಿದೆ. ಈ ಭಾಗದ ಸುತ್ತಮುತ್ತಲಿನ ನೂರಾರು ಹಳ್ಳಿಯ ರೈತರಿಗೆ ಕೃಷಿ ಮಾಡಲು ನೀರು ಸದುಪಯೋಗವಾಗುತ್ತದೆ. ಸಂಡೂರು ತಾಲೂಕಿನ ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ನಿಸರ್ಗ ಸೌಂದರ್ಯದಿಂದ ಹಾಗೂ ಖನಿಜ ಸಂಪತ್ತಿನಿಂದ ಪ್ರಸಿದ್ಧವಾಗಿವೆ.