ಕಾಫಿ ನಾಡಿನಲ್ಲಿ ಮತ್ತೆ ಶುರುವಾಯ್ತು ಪ್ರವಾಸಿಗರ ಭೇಟಿ... ಚೆಕ್ ಪೋಸ್ಟ್ ಸಿಬ್ಬಂದಿ ಫುಲ್ ಅಲರ್ಟ್ - ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ದತ್ತ ಪೀಠ, ಗಾಳಿ ಕೆರೆ,
ಕೋವಿಡ್-19 ಭೀತಿ ಹಿನ್ನೆಲೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಇಂದಿನಿಂದ ಪುನಃ ಅವಕಾಶ ಕಲ್ಪಿಸಿಕೊಡಲಾಗಿದ್ದು, ಜಿಲ್ಲೆಯಿಂದ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ದತ್ತ ಪೀಠ, ಗಾಳಿ ಕೆರೆ, ಕವಿಕಲ್ ಗುಂಡಿ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿಗೆ ತೆರಳುವ ಪ್ರಮುಖ ಮಾರ್ಗವಾದ ಕೈಮರ ಚೆಕ್ ಪೋಸ್ಟ್ನಲ್ಲಿ ಸಿಬ್ಬಂದಿ ಪ್ರತಿಯೊಂದು ವಾಹನಗಳನ್ನು ಪರೀಕ್ಷಿಸಿ ಬಿಡುತ್ತಿದ್ದಾರೆ.