ಹೆಮ್ಮಿಗೆಪುರ ವಾರ್ಡ್ಗೆ ಬಂದ ಹೊಸ ಅತಿಥಿ...ಕಾಲುವೆಯಿಂದ ಹೊರಬಂದ ಆಮೆಗಳು - ಕಾಲುವೆಯಿಂದ ಹೊರಬಂದ ಆಮೆಗಳು
ಬೆಂಗಳೂರು ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಕಾಲುವೆಗಳು ತುಂಬಿ ಹರಿದಿದ್ದರಿಂದ ಎಜಿಎಸ್ ಉತ್ತರಹಳ್ಳಿ ವಾರ್ಡ್ ವ್ಯಾಪಿಯ ಕಾಲುವೆಯಿಂದ ಎರಡು ಬೇರೆ ಬೇರೆ ಜಾತಿಯ ಆಮೆಗಳು ಹೊರಬಂದಿದ್ದವು. ಕೂಡಲೇ ಸ್ಥಳೀಯರು ಬಿಬಿಎಂಪಿಗೆ ಮಾಹಿತಿ ನೀಡಿದ್ದಾರೆ. ಪಾಲಿಕೆಯ ವನ್ಯ ಜೀವಿ ಸಂರಕ್ಷಕ ಪ್ರಸನ್ನ ಅವರು ಸ್ಥಳಕ್ಕೆ ಧಾವಿಸಿ ಎರಡು ಆಮೆಗಳನ್ನು ರಕ್ಷಿಸಿದ್ದಾರೆ. ಬಳಿಕ ಹೆಮ್ಮಿಗೆಪುರ ವಾರ್ಡ್ ನಂ. 198 ತುರಹಳ್ಳಿ ರಾಜ್ಯ ಅರಣ್ಯ ಮೀಸಲು ಪ್ರದೇಶಕ್ಕೆ ಆಮೆಗಳನ್ನು ಬಿಡಲಾಗಿದೆ.