ಪೌರತ್ವ ತಿದ್ದುಪಡಿ ಕಿಚ್ಚು: ಕೇರಳದಲ್ಲಿ ಎಡಪಕ್ಷದ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ - ಪೌರತ್ವ
ವಯನಾಡು(ಕೇರಳ): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಸಲಾಗುತ್ತಿವೆ. ಹಲವೆಡೆ ಪ್ರತಿಭಟನೆಗಳು ಹಿಂಸಾರೂಪ ಪಡೆದಿವೆ. ಮತ್ತೊಂದೆಡೆ ಕೇರಳದಲ್ಲಿಯೂ ಕೂಡ ಹಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿವೆ. ಶನಿವಾರ ರಾತ್ರಿ ಎಡಪಕ್ಷಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಂಜಿನ ಮೆರವಣಿಗೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.