ನಾಳೆ ಕರ್ನಾಟಕ ಬಂದ್: ಈ ಬಗ್ಗೆ ಹುಬ್ಬಳ್ಳಿ ಜನತೆ ಏನ್ ಹೇಳ್ತಾರೆ ? - Karnataka Band news
ಹುಬ್ಬಳ್ಳಿ: ರೈತ ಮಸೂದೆ ಹಾಗೂ ಭೂ ಸುಧಾರಣೆ ಕಾಯ್ದೆ ಹಿಂಪಡೆಯುವಂತೆ ರೈತ ಸಂಘಟನೆಗಳು 28 ರಂದು ಸಂಪೂರ್ಣವಾಗಿ ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆ, ಹುಬ್ಬಳ್ಳಿ ಜನತೆ ಭಾರತ ಬಂದ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊದಲೇ ಕೊರೊನಾ ಹಿನ್ನೆಲೆ ಕಳೆದ ಆರು ತಿಂಗಳಿನಿಂದ ಎಲ್ಲಾ ವಾಣಿಜ್ಯ ಹಾಗೂ ಇನ್ನಿತರ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದ್ದು, ಈಗ ಮತ್ತೆ ಬಂದ್ ಮಾಡಿದರೇ ಹೇಗೆ?. ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತ ಮುಖಂಡರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.