ನಾರಿಯಲ್ ಪೂರ್ಣಿಮಾ: ಕಡಲ ಮಕ್ಕಳಿಂದ ಸಮುದ್ರಕ್ಕೆ ವಿಶೇಷ ಪೂಜೆ - arabian sea
ಉಡುಪಿ: ನಾರಿಯಲ್ ಪೂರ್ಣಿಮಾ ಕಡಲಮಕ್ಕಳಿಗೆ ಅತ್ಯಂತ ಪುಣ್ಯದಿನ. ಮೀನುಗಾರ ಸಮುದಾಯದವರು ಅರಬ್ಬಿ ಸಮುದ್ರಕ್ಕೆ ಪೂಜೆ ಸಲ್ಲಿಸಿ ಉತ್ತಮ ಮೀನುಗಾರಿಕೆಗಾಗಿ ಪ್ರಾರ್ಥಿಸುವ ದಿನ. ಪಶ್ಚಿಮ ಕರಾವಳಿಯ ಮೀನುಗಾರರು ಉಡುಪಿಯ ಮಲ್ಪೆಯಲ್ಲಿ ಕಡಲ ಪೂಜೆ ಮಾಡಿದ್ದಾರೆ. ಯಾವುದೇ ಅಪಾಯವಿಲ್ಲದೆ ಮೀನುಗಾರಿಕೆ ನಡೆಯಲಿ. ಕಡಲಿನಲ್ಲಿ ಹೇರಳವಾಗಿ ಮೀನು ಲಭ್ಯವಾಗಲಿ ಎಂದು ಸಮುದ್ರ ರಾಜನನ್ನು ಪ್ರಾರ್ಥಿಸಿದ್ದಾರೆ.