ಪ್ರಧಾನಿ ಮೋದಿ ಪದಗ್ರಹಣ: ಬಿಜೆಪಿ ಕಾರ್ಯಕರ್ತನಿಂದ ಉಚಿತ ಟೀ ಹಂಚಿಕೆ - undefined
ಮಂಡ್ಯ: ಪ್ರಧಾನಿಯಾಗಿ ಇಂದು ಸಂಜೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ಉಚಿತ ಟೀ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಉಪ್ಪರಕನಹಳ್ಳಿ ಗೇಟ್ ಬಳಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎಂಬಾತ ಉಚಿತವಾಗಿ ಟೀ ಹಂಚಿದ ವ್ಯಾಪಾರಿ. ಮಂಡ್ಯ ಮತ್ತು ನಾಗಮಂಗಲ ರಸ್ತೆಯಲ್ಲಿ ಪ್ರಯಾಣ ಮಾಡುವ ವಾಹನ ಸವಾರರು, ಗ್ರಾಮಸ್ಥರಿಗೆ, ಬಸ್ನಲ್ಲಿ ಪ್ರಯಾಣ ಮಾಡುತ್ತಿರುವವರಿಗೂ ಟೀ ನೀಡಿ ಶಿವಕುಮಾರ್ ಸಂಭ್ರಮಿಸಿದರು.