ಇಂದು ವಿಶ್ವ ಗುಬ್ಬಚ್ಚಿಗಳ ದಿನ: ಅವುಗಳನ್ನು ರಕ್ಷಿಸಲು ಮುಂದಾಗೋಣ ಎಂದ ಮೊಗ್ಗಿನ ಮನಸು ಬೆಡಗಿ - ಪುಟ್ಟ ಗುಬ್ಬಚ್ಚಿಗಳ ರಕ್ಷಣೆ
ಬೆಂಗಳೂರು: ಚಿಂವ್ ಚಿಂವ್ ಎನ್ನುವ ಪುಟ್ಟ ಗುಬ್ಬಚ್ಚಿಗಳ ರಕ್ಷಣೆಗೆ ಮೊಗ್ಗಿನ ಮನಸು ಹುಡುಗಿ ಶುಭಾ ಪೂಂಜಾ ಕೆಲವು ಸಲಹೆಗಳನ್ನು ನೀಡಿದ್ದಾರೆ. ತಮ್ಮ ಬಾಲ್ಯದ ದಿನಗಳಲ್ಲಿ ಚಿಕ್ಕ ಚಿಕ್ಕ ಗುಬ್ಬಚ್ಚಿಗಳನ್ನು ನಮ್ಮ ಸುತ್ತಮುತ್ತಲಿನ ಮರಗಳಲ್ಲಿ ನೋಡ್ತಿದ್ವಿ. ಅದ್ರೆ ಈಗ ಪುಟ್ಟ ಗುಬ್ಬಚ್ಚಿಗಳನ್ನು ನೋಡ್ತಿದ್ದೀರಾ? ಖಂಡಿತವಾಗಿ ಇಲ್ಲ. ಯಾಕಂದ್ರೆ ಪರಿಸರ ನಾಶ, ಮೊಬೈಲ್ ಟವರ್ಗಳಿಂದ ಬರುವ ವಿಕಿರಣಗಳಿಂದ ಗುಬ್ಬಚ್ಚಿಗಳು ಕಾಣೆಯಾಗಿವೆ. ಹಾಗಾದ್ರೆ ಮತ್ತೆ ನೀವು ಆ ಗುಬ್ಬಿಗಳನ್ನು ನೋಡಬೇಕಾದ್ರೆ ಹೀಗೆ ಮಾಡಿ. ಸಂಸ್ಕೃತಿ ಫೌಂಡೇಶನ್ ಚಿಕ್ಕ ಚಿಕ್ಕ ಪಕ್ಷಿಗಳ ರಕ್ಷಿಸುವ ಕೆಲಸಕ್ಕೆ ಮುಂದಾಗಿದೆ. ಇವರ ಜೊತೆ ನಾವೂ ಕೈಜೋಡಿಸೋಣ ಬನ್ನಿ ಎಂದು ಕರೆ ನೀಡಿದ್ದಾರೆ.