ಕರ್ನಾಟಕ

karnataka

ETV Bharat / videos

ಶರನ್ನವರಾತ್ರಿ ಏಳನೇ ದಿನ.. ಅರಮನೆಯಲ್ಲಿ ಸರಸ್ವತಿ ಪೂಜೆ ಮಾಡಿದ ಯದುವೀರ್ - ದಸರಾ ಹಬ್ಬ

By

Published : Oct 5, 2019, 7:16 PM IST

ಮೈಸೂರು:ಅರಮನೆಯಲ್ಲಿ ಶರನ್ನವರಾತ್ರಿಯ ಏಳನೇ ದಿನವಾದ ಇಂದು ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಅರಮನೆಯ ಕನ್ನಡಿತೊಟ್ಟಿಯಲ್ಲಿ ಸಾಂಪ್ರದಾಯಿಕವಾಗಿ ಸರಸ್ವತಿ ಪೂಜೆ ನೆರವೇರಿತು. ಶರನ್ನವರಾತ್ರಿಯ ಪ್ರಯುಕ್ತ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಪೂಜಾ ವಿಧಿವಿಧಾನಗಳು ಆರಂಭವಾಗಿದ್ದು, ಇಂದು ಅರಮನೆ ಒಳಗೆ ಇರುವ ಕನ್ನಡಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ವಿದ್ಯಾದೇವತೆಯಾದ ಸರಸ್ವತಿ ಪೂಜೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಿದರು. ಸರಸ್ವತಿ ಭಾವಚಿತ್ರ,ವೀಣೆ,ಪುರಾತನ ಗ್ರಂಥಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಯದುವೀರ್ ಅರಮನೆಯ ರಾಜಪುರೋಹಿತರ ಮಾರ್ಗದರ್ಶನದಲ್ಲಿ ಸರಸ್ವತಿಗೆ ಪೂಜೆ ಸಲ್ಲಿಸಿ ನಂತರ ಚಾಮುಂಡೇಶ್ವರಿ ಅಮ್ಮನವರ ವಿಗ್ರಹಕ್ಕೂ ಪೂಜೆ ಮಾಡಿರೋದು ವಿಶೇಷವಾಗಿತ್ತು.

ABOUT THE AUTHOR

...view details