ಡಿಕೆಶಿಗೆ ಹಾಕಿದ್ದ ಸೇಬಿನ ಹಾರಕ್ಕೆ ಮುಗಿಬಿದ್ದ ಕಾರ್ಯಕರ್ತರು... ಕ್ಷಣಮಾತ್ರದಲ್ಲಿ ಆ್ಯಪಲ್ ಖಾಲಿ - ಹುಬ್ಬಳ್ಳಿ ಧಾರವಾಡಕ್ಕೆ ಆಗಮಿಸಿದ ಡಿಕೆಶಿ
ಹುಬ್ಬಳ್ಳಿ: ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮೊದಲಬಾರಿಗೆ ಅವಳಿ ನಗರಕ್ಕೆ ಆಗಮಿಸಿದ್ದು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕ್ರೇನ್ನ ಮೂಲಕ ಸುಮಾರು 40 ಅಡಿ ಎತ್ತರದ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು. ಕ್ರೇನ್ ಮೂಲ ಹಣ್ಣಿನ ಹಾರವನ್ನು ಕೆಳಗಿಳಿಸುತ್ತಿದ್ದಂತೆಯೇ ಕಾರ್ಯಕರ್ತರು ಅದರ ಮೇಲೆ ಮುಗಿಬಿದ್ದು ಹಣ್ಣು ಕಿತ್ತುಕೊಂಡು ಖಾಲಿ ಮಾಡಿದ್ದಾರೆ. ಸುಮಾರು 2.5 ಕ್ವಿಂಟಲ್ ಸೇಬಿನ ಹಾರದಲ್ಲಿ ಕೊನೆಗೆ ದಾರ ಮಾತ್ರ ಉಳಿದಿತ್ತು. ಬಳಿಕ ಸಚಿವರಿಗೆ ನಗರದುದ್ದಕ್ಕೂ ಕಲಾ ವಾದ್ಯಗಳು ಮೂಲಕ ಮೆರವಣಿಗೆ ಮಾಡಲಾಯಿತು.