ನ. 10ಕ್ಕೆ ಟಿಪ್ಪು ಜಯಂತಿ ಆಚರಣೆ: ಶಾಸಕ ತನ್ವೀರ್ ಸೇಠ್ ಘೋಷಣೆ - ಟಿಪ್ಪು ಜಯಂತಿ ಬಗ್ಗೆ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ
ಮೈಸೂರು: ನವೆಂಬರ್ 10 ರಂದು ಮೈಸೂರಿನ ಪುರಭವನದಲ್ಲಿ ಅದ್ಧೂರಿಯಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ತೀರ್ಮಾನಿಸಿದ್ದೇವೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಪೂರ್ವಭಾವಿ ಸಭೆಯನ್ನು ನಡೆಸಿದ್ದು, ಎಲ್ಲ ಪಕ್ಷದ ಮುಖಂಡರನ್ನು, ಸ್ವಾಮೀಜಿಯವರನ್ನು ಟಿಪ್ಪು ಜಯಂತಿಗೆ ಆಹ್ವಾನಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು ರಾಮ ಜನ್ಮಭೂಮಿ ವಿವಾದದ ತೀರ್ಪು ಸುಪ್ರೀಂ ಕೋರ್ಟ್ನಿಂದ ಹೊರ ಬೀಳಲಿದ್ದು, ತೀರ್ಪು ಏನೇ ಬಂದರು ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದರಿಂದ ಎಲ್ಲರೂ ಶಾಂತಿಯಿಂದ ಇರಬೇಕು. ಹಾಗೂ ಇದೇ ತಿಂಗಳು ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸಲು ನಾವು ಸಿದ್ಧವಿದ್ದೇವೆ ಎಂದು ಹೇಳಿದ್ರು.