ರಾಮ ಮಂದಿರ ಭೂಮಿ ಪೂಜೆ: ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರ ಕಣ್ಗಾವಲು - ಪೊಲೀಸರ ಕಟ್ಟೆಚ್ಚರ
ಬೆಂಗಳೂರು: ಇಂದು ಆಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ನಗರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಉಗ್ರರ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ, ನಗರದ ಪ್ರಮುಖ ಪ್ರದೇಶವಾದ ಮೆಜೆಸ್ಟಿಕ್ನಲ್ಲಿ ಖಾಕಿ ಕಣ್ಗಾವಲಿಡಲಾಗಿದೆ. ಸೂಕ್ಷ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಇನ್ನುಳಿದಂತೆ ನಗರದ ಇತರ ಭಾಗಗಳಲ್ಲೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.