ಹುಲಿ ದಾಳಿಯ ಪ್ರತ್ಯಕ್ಷ ಕ್ಷಣಗಳು: ಹಸುವಿನ ಮಾಲೀಕನ ಕಣ್ಣೀರ ಕಥೆ - ಹಸುವಿನ ಮೇಲೆ ದಾಳಿ ನಡೆಸಿದ ಹುಲಿ
ಕೊಡಗು: ಮಂಜಿನ ನಗರಿ ಕೊಡಗಿನಲ್ಲಿ ಹುಲಿ ದಾಳಿ ಪ್ರಕರಣಗಳು ಎಲ್ಲೆ ಮೀರಿವೆ. ಅದರಲ್ಲೂ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತಾನ ಹಾಡಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಮಾಲೀಕನ ಎದುರೇ ಹಸುವನ್ನ ಹುಲಿಯೊಂದು ಕೊಂದು ಹಾಕಿದೆ. ಜೀವನಾಧಾರವನ್ನೇ ಕಳೆದುಕೊಂಡ ಮಾಲೀಕ ಕಣ್ಣೀರು ಹಾಕುತ್ತಿದ್ದು, ಹುಲಿ ದಾಳಿಯ ಪ್ರತ್ಯಕ್ಷ ಕ್ಷಣಗಳನ್ನು ಭಯ ಹಾಗೂ ನೋವಿನಿಂದಲೇ ಹೇಳಿಕೊಂಡಿದ್ದಾರೆ.