ಬೆಂಕಿಯಂತಾಗಿದ್ದ ಬೆಳಗಾವಿಗೆ ತಂಪೆರೆದ ಮಳೆ.. ಸಿಡಿಲಿಗೆ ಅಬ್ಬರಕ್ಕೆ ಉರಿದವು ತೆಂಗಿನಮರಗಳು - ಗುಡುಗು, ಮಿಂಚು ಸಹಿತ ಮಳೆ
ಬೆಳಗಾವಿ : ಮಹಾನಗರ ಸೇರಿ ಜಿಲ್ಲೆಯಲ್ಲಿ ಇಂದು ಸಂಜೆ ಸುರಿದ ಗುಡುಗು ಸಹಿತ ಭಾರಿ ಮಳೆ ಕಾದು ಕೆಂಡವಾಗಿದ್ದ ಕುಂದಾನಗರಿಗೆ ತಂಪೆರೆದಿದೆ. ಆದರೆ, ಕೆಲ ಕಡೆ ಮರಗಳು ನೆಲಕ್ಕೆ ಉರುಳಿವೆ. ವಾಹನಗಳು ಜಕ್ಕಂ ಆಗಿರುವ ಘಟನೆ ಕೂಡ ನಡೆದಿದೆ. ತಾಲೂಕಿನ ಸಾಂಬ್ರಾ ಗ್ರಾಮದ ಬೈರಾದೇವಿ ಆವರಣದಲ್ಲಿರುವ ಮೂರು ತೆಂಗಿನಮರಗಳಿಗೆ ಸಿಡಿಲು ಬಡಿದು ಹೊತ್ತಿ ಉರಿದಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.