ಸಿಡಿಲು ಬಡಿದು ಧಗ ಧಗ ಹೊತ್ತಿ ಉರಿದ ತೆಂಗಿನಮರ - ಶಿವಮೊಗ್ಗ ಜಿಲ್ಲಾದ್ಯಂತ ಗುಡುಗು,ಸಿಡಿಲು ಸಹಿತ ಮಳೆ
ಇಂದು ಸಂಜೆ ವೇಳೆಗೆ ಶಿವಮೊಗ್ಗ ಜಿಲ್ಲಾದ್ಯಂತ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ನಗರದ ಪಾರ್ಕ್ ಬಡಾವಣೆಯ ಮೊದಲನೆ ಕ್ರಾಸ್‌ನಲ್ಲಿರುವ ನಂದಿನಿ ಪಿಜಿ ಬಳಿಯ ತೆಂಗಿನಮರಕ್ಕೆ ಸಿಡಿಲು ಬಡಿದು ತೆಂಗಿನಮರ ಧಗ ಧಗ ಹೊತ್ತಿ ಉರಿದಿದೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.