ನೋಟುಗಳನ್ನು ಎಸೆದು ಹೋದ ಅಪರಿಚಿತರು: ಗಂಗಾವತಿ ಜನರಲ್ಲಿ ಆತಂಕ
ಗಂಗಾವತಿ: ನಗರದ ಹೇರೂರು ಓಣಿಯಲ್ಲಿ ಅಪರಿಚಿತ ವ್ಯಕ್ತಿಗಳು ಹತ್ತು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಎಸೆದು ಹೋಗಿದ್ದಾರೆ. ಕೊರೊನಾ ವೈರಸ್ ಭೀತಿಯಿಂದಾಗಿ ಯಾರೊಬ್ಬರು ನೋಟನ್ನು ಮುಟ್ಟಲು ಮುಂದಾಗಿಲ್ಲ. ಬದಲಾಗಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶಹನಾಜ್ ಬೇಗಂ ಸ್ಥಳಕ್ಕೆ ಆಗಮಿಸಿ, ನೋಟುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.