ಕೊರೊನಾ ಭೀತಿ ನಡುವೆ ಮನೆ ಮುಂದೆ ನೋಟು ಎಸೆದುಹೋದ ಕಿಡಿಗೇಡಿಗಳು: ಹೆಚ್ಚಿದ ಆತಂಕ - 20, 50 ರೂ. ಮುಖ ಬೆಲೆಯ ನೋಟುಗಳನ್ನು ಮನೆ ಮುಂದೆ ಎಸೆದುಹೋದ ಕಿಡಿಗೇಡಿಗಳು
ರಾಯಚೂರು: ಕೊರೊನಾ ವೈರಸ್ ಭೀತಿ ನಡುವೆಯೇ ಮನೆಗಳ ಮುಂದೆ 20, 50 ರೂ. ಮುಖ ಬೆಲೆಯ ನೋಟುಗಳನ್ನು ಎಸೆದು ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಕಂಡುಬಂದಿದೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಘಟನೆ ಕುರಿತು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.