ಮೂರು ಸಾವಿರ ವೋಲ್ಟ್‌ನ ವಿದ್ಯುತ್ ತಂತಿ ತುಂಡು.. ಬೆಚ್ಚಿ ಬಿದ್ರು ಮನೆ ಮಂದಿ.. - ಲಕ್ಷಾಂತರ ಮೌಲ್ಯ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಇಂದ್ರಾನಗರದ ಆದಮ್ ಷರೀಫ್ ಎಂಬುವರ ಮನೆಯ ಮೇಲೆ ಮೂರು ಸಾವಿರ ವೋಲ್ಟ್‌ನ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಇದರಿಂದಾಗಿ ಮನೆಯಲ್ಲಿದ್ದ ಫ್ರಿಡ್ಜ್,ಟಿವಿ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಅಷ್ಟೇ ಅಲ್ಲ, ಮನೆಯ ಟೈಲ್ಸ್‌ಗಳೂ ಕೂಡಾ ಪುಡಿ ಪುಡಿಯಾಗಿವೆ. ಇದರಿಂದಾಗಿ ಮನೆಯವರು ಬೆಚ್ಚಿ ಬೀಳುವಂತಾಗಿದೆ.