ಕಬ್ಬು ಕಟಾವು ವೇಳೆ ಮೂರು ಮರಿಚಿರತೆಗಳ ದರ್ಶನ.. ರೈತರಲ್ಲಿ ಆತಂಕ.. - ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಂಚೆಬೀರನಹಳ್ಳಿ ಗ್ರಾಮದ ಹೊರ ವಲಯದ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿವೆ. ಗ್ರಾಮದ ನಂಜುಂಡೇಗೌಡರ ಕಬ್ಬಿನ ಗದ್ದೆಯಲ್ಲಿ ಸಿಕ್ಕಿರುವ ಚಿರತೆ ಮರಿ ಸುಮಾರು ನಾಲ್ಕೈದು ದಿನಗಳ ಮರಿಗಳು ಎನ್ನಲಾಗಿದ್ದು, ಕಬ್ಬು ಕಟಾವು ಮಾಡುವ ವೇಳೆ ಕಾಣಿಸಿವೆ. ಮಾಹಿತಿ ತಿಳಿದು ತಾಲೂಕು ಉಪವಲಯ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುತ್ತಮುತ್ತಲ ಗ್ರಾಮಗಳಲ್ಲಿ ಪದೇಪದೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ರೈತರು ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ.