ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಮೂರು ಅಂಗಡಿಗಳು ಬೆಂಕಿಗಾಹುತಿ - ಶಾರ್ಟ್ ಸರ್ಕ್ಯೂಟ್ ಗ್ಯಾರೇಜ್ ಸುಟ್ಟು ಕರಕರು
ದಾವಣಗೆರೆ: ಶಾರ್ಟ್ ಸರ್ಕ್ಯೂಟ್ನಿಂದಾಗಿ ಮೂರು ಅಂಗಡಿಳು ಹೊತ್ತಿ ಉರಿದ ಘಟನೆ ನಿನ್ನೆ ತಡರಾತ್ರಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸ್ ನಿಲ್ದಾಣದ ಬಳಿ ನಡೆದಿದ್ದು, ತಡವಾಡಿ ಬೆಳಕಿದೆ ಬಂದಿದೆ. ಅಗ್ನಿ ಅವಘಡಕ್ಕೆ ಗ್ಯಾರೇಜ್, ಕುಷನ್ ವರ್ಕ್ ಅಂಗಡಿಗಳ ವಸ್ತುಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಎಲ್ಲಾ ವಸ್ತುಗಳು ಸುಟ್ಟು ಬೂದಿಯಾಗಿದ್ದವು. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.