ಉಡುಪಿ: ದನದ ಕೊಟ್ಟಿಗೆಯಲ್ಲಿ ಅವಿತಿದ್ದ ಮೂರು ಹೆಬ್ಬಾವುಗಳ ರಕ್ಷಣೆ - ವಿಡಿಯೋ - ಉಡುಪಿಯ ಕಾಪುವಿನ ಮನೆಯಲ್ಲಿ ಹೆಬ್ಬಾವುಗಳ ರಕ್ಷಣೆ
ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳದ ಆಲ್ವಿನ್ ಪ್ರಕಾಶ್ ಎಂಬವರ ಮನೆಯ ದನದ ಕೊಟ್ಟಿಗೆಯಲ್ಲಿ ಮೂರು ಹೆಬ್ಬಾವುಗಳು ಪತ್ತೆಯಾಗಿವೆ. ದನದ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ಮೂರೂ ಹೆಬ್ಬಾವುಗಳನ್ನು ಉರಗ ಪ್ರೇಮಿ ಶಿವಾನಂದ್ ಪೂಜಾರಿ ಮತ್ತು ಗೆಳೆಯರು ರಕ್ಷಿಸಿದ್ದಾರೆ. ದನದ ಕೊಟ್ಟಿಗೆಯಲ್ಲಿ ಹೆಬ್ಬಾವುಗಳನ್ನು ಗಮನಿಸಿದ ಆಲ್ವಿನ್ ಪ್ರಕಾಶ್ ಮನೆಯವರು ಗಾಬರಿಗೊಂಡರು ತಕ್ಷಣ ಶಿವಾನಂದ್ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಶಿವಾನಂದ್ ಮತ್ತು ತಂಡ ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.