ಹಾವೇರಿ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರಕ್ಕೆ ಮೂವರು ಬಲಿ - ಹಾವೇರಿ ಮಳೆ ಸುದ್ದಿ
ಹಾವೇರಿ ಜಿಲ್ಲೆಯಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ ಬಾರಿ ಉಂಟಾದ ಪ್ರವಾಹದ ನೋವಿನಿಂದಲೇ ಸಂತ್ರಸ್ತರು ಇನ್ನೂ ಸುಧಾರಿಸಿಕೊಂಡಿಲ್ಲ. ಅದಾಗಲೇ ಮತ್ತೊಮ್ಮೆ ವರುಣ ತನ್ನ ಆರ್ಭಟ ತೋರಿದ್ದು, ಜೀವಹಾನಿ, ಆಸ್ತಿಹಾನಿ, ಬೆಳೆಹಾನಿ ಉಂಟು ಮಾಡಿ, ಜನರನ್ನ ಇನ್ನಷ್ಟು ಸಂಕಷ್ಟಕ್ಕೆ ದೂಡಿದ್ದಾನೆ.