ಮೂಲ-ವಲಸೆ ಕಾಂಗ್ರೆಸ್ಸಿಗರು ಎಂದು ಹೇಳುವವರು ಮೂರ್ಖರು.. ಕೈ ಮುಖಂಡ ಕೆ ಎನ್ ರಾಜಣ್ಣ - ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಪಕ್ಷದಲ್ಲಿ ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರು ಎಂದು ಹೇಳುವಂತಹ ನಾಯಕರೆಲ್ಲರೂ ಮೂರ್ಖರು ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಕಿಡಿಕಾರಿದ್ದಾರೆ. ಯಾರೇನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಲ್ಲ. ಬಹುತೇಕ ನಾಯಕರು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಓಡಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಮುನಿಯಪ್ಪ ಹೇಳಲಿ, ತಿಮ್ಮಪ್ಪ ಹೇಳಲಿ ಯಾವನೇ ಹೇಳಿದರೂ ಸ್ವಾರ್ಥಕ್ಕೋಸ್ಕರವೇ ಆ ಪದ ಬಳಸುತ್ತಾರೆ ಎಂದರು.