ಇವರು ಕರಾವಳಿಯ ಉಸೈನ್ ಬೋಲ್ಟ್: ಕಂಬಳದ ಶರವೇಗದ ಓಟಗಾರ ಶ್ರೀನಿವಾಸ ಗೌಡ - ಉಸೈನ್ ಬೋಲ್ಟ್ ಓಟದಲ್ಲಿ ವಿಶ್ವದಾಖಲೆ
ಮಂಗಳೂರು: ಮಿಂಚಿನ ವೇಗದ ಓಟಗಾರ ಜಮೈಕಾದ ಉಸೈನ್ ಬೋಲ್ಟ್ ಸಾಧನೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ? 100 ಮೀ ಓಟವನ್ನು ಇವರು ಕೇವಲ 9.58 ಸೆಕೆಂಡುಗಳಲ್ಲಿ ತಲುಪಬಲ್ಲರು. ಇವರನ್ನು ನೆನಪಿಸುವಂಥ ಒಬ್ಬ ಓಟಗಾರ ನಮ್ಮ ಕರಾವಳಿಯಲ್ಲೂ ಇದ್ದಾರೆ. ಅವರ ಹೆಸರು ಶ್ರೀನಿವಾಸ ಗೌಡ. ಇವರು ಕಂಬಳದಲ್ಲಿ ಕೋಣಗಳ ಜೊತೆ 142.5 ಮೀಟರ್ ದೂರವನ್ನು ಕೇವಲ 13.62 ಸೆಕೆಂಡ್ನಲ್ಲಿ ಮಿಂಚಿನ ವೇಗದಲ್ಲಿ ಕ್ರಮಿಸುತ್ತಾರೆ! ಫೆ. 1 ರಂದು ನಡೆದ ಐಕಳ ಕಂಬಳದಲ್ಲಿ ಈ ಅಪರೂಪದ ಸಾಧನೆಯನ್ನು ಶ್ರೀನಿವಾಸ ಗೌಡ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಈ ವಿಶೇಷ ಸಾಧಕನ ಜೊತೆ ನಮ್ಮ ಪ್ರತಿನಿಧಿ ಮಾತುಕತೆ ನಡೆಸಿದ್ದಾರೆ, ವೀಕ್ಷಿಸಿ..