ಒಂದೇ ವರ್ಷದಲ್ಲಿ ಬರೋಬ್ಬರಿ ಮೂರು ಬಾರಿ ಪ್ರವಾಹ ಅಪ್ಪಳಿಸಿದ ಗ್ರಾಮವಿದು! - ಮಲಪ್ರಭಾ ನದಿ ತೀರದ ಪ್ರವಾಹ
ಒಂದು ಬಾರಿ ನೆರೆ ಉಂಟಾದರೆ ಸಾಕು, ಜೀವನ ಅಸ್ತವ್ಯಸ್ಥವಾಗಿ ಬದುಕು ಮೂರಾಬಟ್ಟೆಯಾಗಿ ಮತ್ತೆ ಬದುಕು ಕಟ್ಟಿಕೊಳ್ಳುವಷ್ಟರಲ್ಲಿ ಸಾಕಪ್ಪಾ ಸಾಕು ಈ ಜೀವನ ಎಂದೆನಿಸುತ್ತೆ. ಅಂತಹದರಲ್ಲಿ ಈ ಜನ ಎದುರಿಸ್ತಿರೋದು ಒಂದಲ್ಲ, ಎರಡಲ್ಲ ಮೂರನೇ ಬಾರಿಯ ನೆರೆಯ ಪ್ರಕೋಪ. ಇಷ್ಟೆಲ್ಲಾ ಅನಾಹುತಗಳಾದ್ರೂ ಯಾವೊಬ್ಬ ಅಧಿಕಾರಿಯಾಗಲೀ ,ಶಾಸಕರಾಗಲಿ ಇತ್ತ ಗಮನ ಹರಿಸುತ್ತಿಲ್ಲ, ಈ ಜನರ ಕಷ್ಟಕ್ಕಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.