ಕಲಬುರಗಿ ತೊಗರಿಗೆ ದೇಶದೆಲ್ಲೆಡೆ ಹೆಚ್ಚಿದ ಬೇಡಿಕೆ... ದಾಲ್ ಮಿಲ್ಗಳಿಗೆ ಮರುಜೀವ! - ತೊಗರಿಗೆ ದೇಶದೆಲ್ಲೆಡೆ ಹೆಚ್ಚಿದ ಬೇಡಿಕೆ
ಕಲಬುರಗಿ: ತೊಗರಿ ಕಣಜವೆಂದೇ ಜನಪ್ರಿಯವಾಗಿರುವ ಕಲಬುರಗಿ ಜಿಲ್ಲೆಯ ತೊಗರಿ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಇಲ್ಲಿಯ ತೊಗರಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಇದಕ್ಕೆ ದೇಶದೆಲ್ಲೆಡೆ ಬೇಡಿಕೆ ಹೆಚ್ಚಿದೆ. ಪೌಷ್ಟಿಕಾಂಶ ಮತ್ತು ಸ್ವಾದವನ್ನು ಹೊಂದಿದೆ. ಅಂತಹ ತೊಗರಿ ಭೌಗೋಳಿಕ ಸೂಚ್ಯಂಕ ಪಡೆಯುವ ಮೂಲಕ ಮತ್ತೊಂದು ಕಿರೀಟವನ್ನು ಮುಡಿಗೇರಿಸಿಕೊಂಡಿದೆ.