ಕಿವಿ ಕೇಳದ, ಮಾತು ಬಾರದ ಮಕ್ಕಳಿಗಾಗಿ ಆಸ್ತಿ ಮಾರಿ ಶಾಲೆ ಆರಂಭಿಸಿದ ದಂಪತಿ! - deaf children
ಮಗಳಿಗೆ ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ. ಮುಂದೆ ಮಗಳ ಬದುಕು ಹೇಗೆ? ಎಂದು ಆತಂಕಗೊಂಡ ತಾಯಿ. ಮಗಳಿಗೆ ಮಾತು ಬರಲಿ, ಕಿವಿ ಕೇಳಲಿ ಅಂತಾ ಕರ್ನಾಟಕ, ಮಹಾರಾಷ್ಟ್ರ ಅನೇಕ ಭಾಗಗಳಲ್ಲಿ ದೇವರಿಗೆ ಹರಕೆ ಹೊತ್ತಿದ್ದಾಯ್ತು. ನೂರಾರು ಆಸ್ಪತ್ರೆ ಸುತ್ತಿದ್ದಾಯ್ತು. ಮೈಸೂರಿನಲ್ಲಿ ಮಗಳಿಗೆ ಚಿಕಿತ್ಸೆ ಕೊಡಿಸಿದ ಈ ತಾಯಿ, ಕೊನೆಗೂ ಗುಣಮುಖರಾಗಿಸಿದಳು. ನನ್ನ ಮಗಳಿಗೆ ಬಂದ ಪರಿಸ್ಥಿತಿ ಬೇರೆ ಯಾವ ಮಕ್ಕಳಿಗೂ ಬಾರದಿರಲಿ ಎಂದು ತಮ್ಮ ಆಸ್ತಿಯನ್ನು ಮಾರಿ, ಕಿವಿ ಕೇಳದ ಮಾತು ಬಾರದ 70ಕ್ಕೂ ಅಧಿಕ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ತನ್ನ ಮಗಳ ಹೆಸರಿನಿಂದ ಮಾತು ಬಾರದ ಮಕ್ಕಳಿಗೆ ಮಾತು ಕಲಿಕಾ ವಸತಿ ಶಾಲೆಯನ್ನು ಆರಂಭಿಸಿದ್ದಾರೆ ಈ ದಂಪತಿ!