ನನಗೂ ಸಚಿವ ಸ್ಥಾನ ನೀಡಿ: ಈಟಿವಿ ಭಾರತದೊಂದಿಗೆ ತಿಪ್ಪಾರೆಡ್ಡಿ ಮನದಾಳದ ಮಾತು - ಹಿರಿಯ ಶಾಸಕ ತಿಪ್ಪಾರೆಡ್ಡಿ ನ್ಯೂಸ್
ಚಿತ್ರದುರ್ಗ: ಸಿಎಂ ಯಡಿಯೂರಪ್ಪನವರು ಹಿರಿಯ ಶಾಸಕರನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಈಗಾಗಲೇ ಉತ್ತರ ಕರ್ನಾಟಕದಲ್ಲಿ ಹಿರಿಯ ಶಾಸಕರು ಸಭೆ ಸೇರಿ ಮಾತುಕತೆ ನಡೆಸಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಹಿರಿಯ ಶಾಸಕ ತಿಪ್ಪಾರೆಡ್ಡಿ, ಈಟಿವಿ ಭಾರತದೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದು, ಸಚಿವ ಸ್ಥಾನವನ್ನು ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ.