ರಾತ್ರಿ ವೇಳೆ ಕಳ್ಳರ ಕರಾಮತ್ತು: ಕಾರುಗಳ ಟೈಯರ್ ಕದ್ದ ಖದೀಮರು - Belagavi Thieves who stole a tire of cars News
ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಟೈಯರ್ ಕದ್ದು ಖದೀಮರು ಕರಾಮತ್ತು ತೋರಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಗೋಕಾಕ್ನ ಸಂಗಮ ನಗರದಲ್ಲಿ ಐದು ವಿವಿಧ ಕಂಪನಿಯ ಕಾರುಗಳ ಟೈಯರ್ಗಳು ಕಳ್ಳತನವಾಗಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಗಸ್ತು ವೈಫಲ್ಯವೇ ಇಂತಹ ಕೃತ್ಯಗಳು ನಡೆಯಲು ಕಾರಣವೆಂದು ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಕಾಕ್ ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.